Wednesday, September 17, 2014

ಕೈಯ ದುಡುಕಿಸಬೇಡ ಜೀವಪರಿಸರಗಳಲಿ (667)

ಕೈಯ ದುಡುಕಿಸಬೇಡ ಜೀವಪರಿಸರಗಳಲಿ |
ಗಾಯ ಮಾಯದು ಬೆರಲು ತಗಲುತಿರಲದಕೆ ||
ಕಾಯಿ ಮಾಗದು ಹುಲ್ಲೊಳದನು ಬಿಡದವುಕುತಿರೆ |
ಸ್ವಾಯತ್ತೆಯಿಂದಾತ್ಮ - ಮರುಳ ಮುನಿಯ || (೬೬೭)

(ತಗಲುತ+ಇರಲ್+ಅದಕೆ)(ಹುಲ್ಲೊಳ್+ಅದನು)(ಬಿಡದೆ+ಅವುಕುತ+ಇರೆ)(ಸ್ವಾಯತ್ತೆಯಿಂದ+ಆತ್ಮ)

ನಿನ್ನ ಕೈಗಳನ್ನು ಮುಂದಾಲೋಚನೆಯಿಲ್ಲದೆ, ಪ್ರಕೃತಿಯ ಜೀವ ಮತ್ತು ಪರಿಸರಗಳಲ್ಲಿ ಆಡಿಸಬೇಡ. ಸದಾ ಕಾಲವೂ ನಿನ್ನ ಬೆರಳುಗಳು ಅದಕ್ಕೆ ತಗಲುತ್ತಿದ್ದರೆ, ಅದು ಗಾಯವನ್ನು ವಾಸಿಯಾಗಲು ಬಿಡುವುದಿಲ್ಲ. ಕಾಯನ್ನು ಹುಲ್ಲಿನೊಳಗಡೆ ಬಿಗಿಯಾಗಿ ಅದುಮಿಟ್ಟರೆ ಅದು ಹಣ್ಣಾಗಲಾರದು. ಸ್ವಾಧೀನತೆಯಿಂದ(ಸ್ವಯತ್ತೆ) ಆತ್ಮಶಕ್ತಿಯು ವೃದ್ಧಿಯಾಗುತ್ತದೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Rush not your hands on life and environment,
The wound doesn’t heal when your finger frequently touches it,
The unique fruit in hay doesn’t ripen, if you keep on pressing it now and then,
Autonomy is essential for the excellence of Atman – Marula Muniya
(Translation from "Thus Sang Marula Muniya" by Sri. Narasimha Bhat)

No comments:

Post a Comment