Monday, August 18, 2014

ನಿರವಧಿಯ ಕಾಲದಂಶವೆ ನಮ್ಮ ಘಟಿ ವಿಘಟಿ (648)

ನಿರವಧಿಯ ಕಾಲದಂಶವೆ ನಮ್ಮ ಘಟಿ ವಿಘಟಿ |
ಪರಬೊಮ್ಮನೊಂದಂಶ ಜೀವವಾದಂತೆ ||
ಧರೆಯರೆಕ್ಷಣದ ಬಾಳೆಲೆ ಬರಿದದೆನ್ನದಿರು |
ಕ್ಷರವೆ ಮುಖವಕ್ಷರಕೆ - ಮರುಳ ಮುನಿಯ || (೬೪೮)

(ಕಾಲದ+ಅಂಶವೆ)(ಪರಬೊಮ್ಮನ+ಒಂದು+ಅಂಶ)(ಜೀವವ+ಆದಂತೆ)(ಧರೆಯ+ಅರೆಕ್ಷಣದ)(ಮುಖ+ಅಕ್ಷರಕೆ)

ಅಳೆಯಲಿಕ್ಕೆ ಸಾಧ್ಯವಾಗದ ಕಾಲದ ಭಾಗವೇ ನಮ್ಮ ಕಾಲದ ಮಾಪನಗಳಾದ ೨೪ ನಿಮಿಷಗಳ ಘಟಕ (ಘಟಿ) ಮತ್ತು ೨೪ ಕ್ಷಣಗಳ ಘಟಕ (ವಿಘಟಿ). ಇದು ಪರಮಾತ್ಮನ ಒಂದು ಭಾಗವು ಜೀವವಾಗುವುದಕ್ಕೆ ಹೋಲಿಸಬಹುದು. ಭೂಮಿಯ (ಧರೆಯ) ಮೇಲಿನ ನಮ್ಮ ಒಂದು ಅರ್ಧಕ್ಷಣದ ಬಾಳು ಕೇವಲ ಶೂನ್ಯವೆನ್ನಬೇಡ. ಅಮರತ್ವದ (ಅಕ್ಷರ) ಮುಖವೇ ನಶ್ವರತೆ (ಕ್ಷರ).
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")

Our hours and minutes are parts of eternal time,
Just as our soul is a part of the Infinite God,
Say not that life in this world is momentary and hollow,
Ephemeral is the face of the Eternal – Marula Muniya
(Ephemeral: lasting for a very short time)
(Translation from "Thus Sang Marula Muniya" by Sri. Narasimha Bhat)

No comments:

Post a Comment